Wednesday, June 10, 2026

ರಾಜ್ಯ

ರಾಜ್ಯಶಿಕ್ಷಣ

ರಾಜ್ಯದಲ್ಲಿ ‘ಶಾಲೆ’ಗಳ ಆರಂಭಕ್ಕೆ ಗ್ರೀನ್ ಸಿಗ್ನಲ್.? ಸಿಎಂ ಯಡಿಯೂರಪ್ಪ ಒಪ್ಪಿಗೆಯಷ್ಟೇ ಬಾಕಿ.? – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ಜನವರಿ 1, 2020ರಿಂದ ಶಾಲೆಗಳ ಆರಂಭಕ್ಕೆ ಉನ್ನತ ಮಟ್ಟದ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ. ಹೀಗಾಗಿ ಜನವರಿ 1ರಿಂದ 10 ಮತ್ತು 12ನೇ ತರಗತಿಯ ಶಾಲೆಗಳು ರಾಜ್ಯದಲ್ಲಿ ಆರಂಭವಾಗೋದು ಪಕ್ಕಾ ಆದಂತೆ ಆಗಿದ್ದು, ಸಿಎಂ ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ರೇ.. ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದಂತೆ ಆಗುತ್ತದೆ. ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಕಳೆದ 9 ತಿಂಗಳಿನಿಂದ ರಾಜ್ಯದಲ್ಲಿ ಶಾಲೆಗಳು ಆರಂಭಗೊಂಡಿರಲಿಲ್ಲ. ಇಂತಹ...
ರಾಜ್ಯ

ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಸರ್ಕಾರ – ಕಹಳೆ ನ್ಯೂಸ್

ಬೆಂಗಳೂರು : ಕರ್ನಾಟಕದ ಸರ್ಕಾರವು ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಚರ್ಚ್ ಗಳಲ್ಲಿ ಹಾಗೂ ಹೋಟೆಲ್, ಮಾಲ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಸಾರ್ವಜನಿಕರು ಸರಳವಾಗಿ ಮತ್ತು ಸುರಕ್ಷಿತವಾಗಿ ಹಬ್ಬ ಆಚರಿಸಬೇಕೆಂದು ವಿನಂತಿಸುತ್ತೇನೆ ಎಂದು ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ. ಮಾರ್ಗಸೂಚಿಗಳು ಇಂತಿವೆ :- *ಕ್ರೈಸ್ತ ಧರ್ಮದ ಚರ್ಚ್‌ಗಳಲ್ಲಿ...
ರಾಜ್ಯಶಿಕ್ಷಣ

ಪಠ್ಯ ಪುಸ್ತಕದಲ್ಲಿ ಬ್ರಾಹ್ಮಣ ಸಮುದಾಯದ ಅವಹೇಳನ ಆರೋಪ : ಸಚಿವ ಸುರೇಶ್ ಕುಮಾರ್ ಹೇಳಿದ್ದೇನು? – ಕಹಳೆ ನ್ಯೂಸ್

ಬೆಂಗಳೂರು : ಆರನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ಕದಲ್ಲಿ ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನ ಮಾಡಿರುವ ಪಾಠವೊಂದು ಪ್ರಕಟವಾಗಿರುವ ಸಂಬಂಧ ಬಹಳ ಚರ್ಚೆಯಲ್ಲಿದ್ದು, ಈ ಕುರಿತು ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಸುರೇಶ್ ಕುಮಾರ್ ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನ ಮಾಡುವ ಪಾಠ ವೊಂದು ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಪ್ರಕಟವಾಗಿರುವ ವಿಚಾರ ಇಂದು ಬಹಳ...
ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಆದ್ಯ ಸುಲೋಚನಾ ಮುಳಿಯ ನೇತೃತ್ವದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಮಾಡಿ ಪುತ್ತೂರಿನ ವಿದ್ಯಾರ್ಥಿಗಳಿಂದ ಸಮಾಜಮುಖಿ ಚಿಂತನೆಗೆ ನಾಂದಿ – ಕಹಳೆ ನ್ಯೂಸ್

ಪುತ್ತೂರು, ಡಿ.16 : ಕೇಶದಾನದಿಂದ ಕ್ಯಾನ್ಸರ್ ಕಾರಣದಿಂದಾಗಿ ರೂಪ ಕಳೆದುಕೊಂಡ ರೋಗಿಗಳಿಗೆ ವಿಗ್ ನೀಡುವುದರ ಮೂಲಕ ಅವರ ಮುಖದಲ್ಲಿ ಮಂದಹಾಸ ತರಬಹುದು. ರಕ್ತದಾನ, ಅಂಗದಾನ ಇದರಂತೆ ಕೇಶದಾನ ಮಾಡುವ ನಿಟ್ಟಿನಲ್ಲಿ ಪುತ್ತೂರಿನ 9 ಶಾಲಾ ವಿದ್ಯಾರ್ಥಿಗಳು ಯೋಜನೆಯೊಂದನ್ನು ರೂಪಿಸಿದ್ದಾರೆ. ಕೇಶದಾನ ಮಾಡುವ ಅಪರೂಪದ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿದ್ದು ಇದು ಉತ್ತಮ ಯೋಜನೆಯಾಗಿ ಹೊರಹೊಮ್ಮಿದೆ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಆದ್ಯ ಸುಲೋಚನಾ ಮುಳಿಯ ಎಂಬ ಕುವರಿಯು...
ಬೆಂಗಳೂರುರಾಜ್ಯಸಿನಿಮಾ

‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದ ಹಾಡಿಗೆ ಧ್ವನಿ ನೀಡಿ ಗಾಯಕರಾದ ನಟ ಪೃಥ್ವಿ ಅಂಬರ್..! – ಕಹಳೆ ನ್ಯೂಸ್

ಬೆಂಗಳೂರು, ಡಿ.16 : ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿರುವುದು ಮಾತ್ರವಲ್ಲ ಹಾಡಿಗೆ ಧ್ವನಿ ನೀಡಿದ್ದಾರೆ.   'ಲೈಫ್ ಈಸ್ ಬ್ಯೂಟಿಫುಲ್' ಚಿತ್ರಕ್ಕೆ ನೊಬಿನ್ ಪೌಲ್ ಸಂಗೀತ ನಿರ್ದೇಶನವಿದೆ. ಈ ಹಾಡಿಗೆ ಪೃಥ್ವಿ ಅಂಬರ್ ಹಾಗೂ ಮದನ್ ಸಾಹಿತ್ಯ ರಚಿಸಿದ್ದಾರೆ. ಇನ್ನು ತನ್ನ ಈ ಅನುಭವದ ಬಗ್ಗೆ ಮಾತನಾಡಿದ ನಟ ಪೃಥ್ವಿ ಅಂಬರ್‌, ''ಇದೇ ಮೊದಲ ಬಾರಿಗೆ ಸಿನಿಮಾಕ್ಕೆ ಹಾಡಿದ್ದೇನೆ. ಈ...
ರಾಜ್ಯ

ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲು ಅಡುಗೆ ಎಣ್ಣೆ, ಬೇಳೆ ನೀಡಿ: ಹೈಕೋರ್ಟ್ – ಕಹಳೆ ನ್ಯೂಸ್

ಬೆಂಗಳೂರು : ಕೊರೊನಾ ಸಂದರ್ಭದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ನೀಡುವುದು ಕಷ್ಟ ಎಂದು ಸರ್ಕಾರ ಹೈಕೋರ್ಟ್‌ಗೆ ಹೇಳಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲು ಅಡುಗೆ ಎಣ್ಣೆ ಹಾಗೂ ಬೇಳೆಯನ್ನು ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.ಮಕ್ಕಳಿಗೆ ಆಹಾರ ಧಾನ್ಯ ವಿತರಿಸಲು ಡಿಸೆಂಬರ್ 5ರಂದೇ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 1 ಕೆಜಿ ಅಯೊಡೈಸ್ಡ್ ಉಪ್ಪು, ತೊಗರಿ ಬೇಳೆ...
ರಾಜಕೀಯರಾಜ್ಯ

ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅವರ ಮಾತನ್ನು ಯಾರು ಕೇಳ್ತಾರೆ..? : ಸಿಎಂ ವ್ಯಂಗ್ಯ – ಕಹಳೆ ನ್ಯೂಸ್

ಬೆಂಗಳೂರು - ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದು ಕಪ್ಪು ಪಟ್ಟಿಯನ್ನಾದರೂ ಧರಿಸಲಿ, ಬಿಳಿ ಪಟ್ಟಿಯನ್ನಾದರೂ ಧರಿಸಲಿ. ಅದನ್ನು ಯಾರು ಕೇಳುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದರು. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಖಂಡಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಸಂಬಂಧ ವಿಧಾನಸೌಧದ ಬಳಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅವರ ಪ್ರತಿಭಟನೆಯನ್ನು ಯಾರು ಕೇಳುತ್ತಾರೆ ಎಂದು ಹೇಳಿದರು. ಕೇಂದ್ರದ ನರೇಂದ್ರ ಮೋದಿ ಸರ್ಕಾರ ರೈತರ ಪರವಾಗಿರುವ ಸರ್ಕಾರ....
ರಾಜ್ಯ

ಲವ್ ಜಿಹಾದ್ ನಿಷೇಧ ಮಸೂದೆ ಮಂಡನೆ ಇಲ್ಲ, ಗೋಹತ್ಯೆ ನಿಷೇಧ ಮಸೂದೆ ಮಂಡನೆ – ಸಿಎಂ ಯಡಿಯೂರಪ್ಪ – ಕಹಳೆ ನ್ಯೂಸ್

ಶಿವಮೊಗ್ಗ : ಈ ಬಾರಿಯ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಲವ್ ಜಿಹಾದ್ ನಿಷೇಧ ಮಸೂದೆ ಮಂಡನೆ ಮಾಡುತ್ತಿಲ್ಲ. ಆದ್ರೇ ಗೋ ಹತ್ಯೆ ನಿಷೇಧ ಕಾಯ್ದೆ ಮಸೂದೆ ಮಂಡನೆ ಮಾಡಲಾಗುತ್ತಿರುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಇಂದು ಸಾಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದಂತ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಗೋಹತ್ಯೆ ನಿಷೇಧವನ್ನ ಅಂಗೀಕರಿಸುವಂತೆ ಸದಸನ ಸಮಿತಿ ಒಪ್ಪಿಗೆ ನೀಡಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ತಿರಸ್ಕರಿಸಿದ್ದರು ಎಂದರು. ಇನ್ನೂ...
1 279 280 281 282 283 297
Page 281 of 297