Wednesday, June 10, 2026

ಜಿಲ್ಲೆ

ಜಿಲ್ಲೆಬೆಳಗಾವಿಸುದ್ದಿ

ಬೆಳಗಾವಿಯಲ್ಲಿ ಮಕ್ಕಳ ರಕ್ಷಣಾ ಕೇಂದ್ರದಿಂದ ಬಾಲಕಿ ಅಪಹಾರಿಸಿದ್ದ ಆರೋಪಿ ಅರೆಸ್ಟ್ : ಪೋಕ್ಸೋ ಕೇಸ್ ದಾಖಲು -ಕಹಳೆ ನ್ಯೂಸ್

ಬೆಳಗಾವಿ : ಮಕ್ಕಳ ರಕ್ಷಣಾ ಕೇಂದ್ರದಿಂದ ಬಾಲಕಿ ಅಪಹರಿಸಿದ ಆರೋಪಿಯನ್ನು ಇದೀಗ ರೇಸ್ ಮಾಡಲಾಗಿದೆ ಬಾಲಕಿಗೆ 13ನೇ ವಯಸ್ಸಿನಲ್ಲಿಯೇ ಆರೋಪ ಜೊತೆಗೆ ಬಾಲ್ಯ ವಿವಾಹವಾಗಿತ್ತು ಆಸ್ಪತ್ರೆಗೆ ಹೋದಾಗ ಬಾಲಕಿಯ ನಾಲ್ಕು ತಿಂಗಳ ಗರ್ಭಿಣಿ ಆಗಿರುವುದು ಪತ್ತೆಯಾಗಿದೆ ಬಳಿಕ ಸಂತ್ರಸ್ತ ಬಾಲಕಿಯನ್ನು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇಡಲಾಗಿತ್ತು. ಬೆಳಗಾವಿಯ ಮಹಾಂತೇಶ್ ನಗರದಲ್ಲಿರುವ ಮಕ್ಕಳ ರಕ್ಷಣಾ ಕೇಂದ್ರಕ್ಕೆ ಬಂದು ತಾನು ಚಿಕ್ಕಪ್ಪ ಎಂದು ಆರೋಪಿ ಹೇಳಿಕೊಂಡಿದ್ದ ರಕ್ಷಣಾ ಕೇಂದ್ರದಲ್ಲಿ ಸಿಸಿಟಿವಿ ಇಲ್ಲ ಸೆಕ್ಯೂರಿಟಿ...
ಜಿಲ್ಲೆಸಂತಾಪಸುದ್ದಿ

ಬಾಗಲಕೋಟೆಯಲ್ಲಿ ರ‍್ಯಾಗಿಂಗ್ ಗೆ ಡೆತ್ ನೋಟ್ ಬರೆದಿಟ್ಟು, ವಿದ್ಯಾರ್ಥಿನಿ ಆತ್ಮಹತ್ಯೆ -ಕಹಳೆ ನ್ಯೂಸ್

ಬಾಗಲಕೋಟೆ : ಬಾಗಲಕೋಟೆಯಲ್ಲಿ ಘೋರ ಘಟನೆ ನಡೆದಿದ್ದು, ರ‍್ಯಾಗಿಂಗ್ ಗೆ ಡೆತ್ ನೋಟ್ ಬರೆದು ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಂಜಲಿ ಮುಂಡಾಸ್ ಎನ್ನುವ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಹಪಾಠಿ ವರ್ಷ ಮತ್ತು ಪ್ರದೀಪ್ ನಿಂದ ಕಿರುಕುಳ ಆರೋಪ ಕೇಳಿ ಬಂದಿದ್ದು ಗುಳೇದಗುಡ್ಡದ ಬಂಡಾರಿ ಕಾಲೇಜ್ ವಿದ್ಯಾರ್ಥಿ ಅಂಜಲಿ ಮುಂಡಾಸ್ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಆಗಿದ್ದಾಳೆ. ಡೆತ್ ನೋಟ್ ಅಲ್ಲಿ ನನ್ನನ್ನು ಮಾನಸಿಕವಾಗಿ ಇವರು ಕುಗ್ಗಿ ಸಿದ್ದಾರೆ....
ಜಿಲ್ಲೆದೆಹಲಿರಾಜ್ಯರಾಷ್ಟ್ರೀಯಸುದ್ದಿ

ಭಾರತದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ‘ಸಲೀಂ ಪಿಸ್ತೂಲ್’ ನೇಪಾಳದಲ್ಲಿ ಬಂಧನ – ಕಹಳೆ ನ್ಯೂಸ್

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಪೊಲೀಸರು ಭಾರತದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ಶೇಖ್ ಸಲೀಂ ಅಲಿಯಾಸ್ 'ಸಲೀಮ್ ಪಿಸ್ತೂಲ್' ನನ್ನು ನೇಪಾಳದಿಂದ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ನೇಪಾಳದಲ್ಲಿ ಪತ್ತೆಯಾದ ನಂತರ ಭದ್ರತಾ ಸಂಸ್ಥೆಗಳು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ಸಲೀಂನನ್ನು ಬಂಧಿಸಿದೆ. ದೆಹಲಿಯ ಸೀಲಾಂಪುರಿ ನಿವಾಸಿ ಸಲೀಂ ಪಾಕಿಸ್ತಾನದಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾನೆ ಎಂದು ಭದ್ರತಾ ಸಂಸ್ಥೆಗಳು ತಿಳಿಸಿವೆ....
ಜಮ್ಮು ಮತ್ತು ಕಾಶ್ಮೀರಜಿಲ್ಲೆರಾಜ್ಯರಾಷ್ಟ್ರೀಯಸಂತಾಪಸುದ್ದಿ

ಜಮ್ಮು-ಕಾಶ್ಮೀರದ ಕುಲ್ಗಾಮ್ ನಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚಾರಣೆ ವೇಳೆ ಇಬ್ಬರು ಯೋಧರು ಹುತಾತ್ಮ-ಕಹಳೆ ನ್ಯೂಸ್

ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಮ್ ನಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ್ದು, ಉಗ್ರರು ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಕುಲ್ಗಾಮ್ ನಲ್ಲಿ ರಾತ್ರಿಯಿಡಿ ಆಪರೇಷನ್ ಅಖಾಲ್ ಕಾರ್ಯಾಚರಣೆ ನಡೆಸಲಾಗಿದ್ದು, ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಲಾರೆನ್ಸ್ ನಾಯಕ್ ಪ್ರೀತ್ಪಾಲ್ ಹಾಗೂ ಸಿಪಾಯಿ ಹರ್ಮಿಂದರ್ ಸಿಂಗ್ ಹುತಾತ್ಮ ಯೋಧರು. ಹುತಾತ್ಮ ಯೋಧರ ಧೈರ್ಯ ಹಾಗೂ ಸಮರ್ಪಣೆ...
ಉಡುಪಿಜಿಲ್ಲೆಸುದ್ದಿ

ಸ್ವಾಂತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕಾಗುವ ಅಪಮಾನವನ್ನು ತಡೆಗಟ್ಟಲು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ -ಕಹಳೆ ನ್ಯೂಸ್

ಉಡುಪಿ : ಸುಪ್ರೀಂ ಕೋರ್ಟ್ ಆದೇಶದಂತೆ ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಮಾರಾಟ ನಿಷೇಧಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಡುಪಿ ಜಿಲ್ಲೆಯಾದ್ಯಂತ ಉಡುಪಿ ಜಿಲ್ಲಾಧಿಕಾರಿಗಳಿಗೆ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಎಲ್ಲಾ ತಾಲೂಕುಗಳ ತಹಶೀಲ್ದಾರರಿಗೆ, ಜಿಲ್ಲಾ ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಹಾಗೂ ಐವತ್ತಕ್ಕೂ ಅಧಿಕ ಶಾಲಾ ಕಾಲೇಜುಗಳಿಗೆ ಮನವಿಯನ್ನು ನೀಡಲಾಯಿತು. ರಾಷ್ಟ್ರ ಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ಅಗಸ್ಟ್ 15 ಮತ್ತು ಜನವರಿ 26ರಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಅಗಸ್ಟ್ 10 ರಂದು  ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಆಟಿಡೊಂಜಿ ಕೂಟ -ಕಹಳೆ ನ್ಯೂಸ್

ಬಂಟ್ವಾಳ : ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಅಗಸ್ಟ್ 10  ರಂದು ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಆಟಿಡೊಂಜಿ ಕೂಟ ನಡೆಯಲಿದೆ. ಬೆಳಗ್ಗೆ ಗಂಟೆ 9.30 ಕ್ಕೆ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ ಸಮಾರಂಭ ಉದ್ಘಾಟಿಸಲಿದ್ದಾರೆ. ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅದೇ ದಿನ‌ ಬೆಳಗ್ಗೆ 10 ಗಂಟೆಗೆ ನಡೆಯುವ ಚೆನ್ನೆಮನೆ ಸ್ಪರ್ಧೆಯನ್ನು ಕರ್ನಾಟಕ...
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿಹೆಚ್ಚಿನ ಸುದ್ದಿ

ಪುಣ್ಯಭೂಮಿ ಧರ್ಮಸ್ಥಳವನ್ನು ಅಪವಿತ್ರಗೊಳಿಸುವ ಯತ್ನವೇಕೇ…!!?? – ಶ್ರೀನಿಧಿ ಹೆಗ್ಡೆ-ಕಹಳೆ ನ್ಯೂಸ್

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಇದು ಕೇವಲ ಒಂದು ಧಾರ್ಮಿಕ ಸ್ಥಳವಲ್ಲ. ಇದು ನಮ್ಮ ನಾಡಿನ ನಂಬಿಕೆಯ ಮಡಿಲು, ಭಕ್ತಿಯ ಶುದ್ಧ ರೂಪ, ಸಹಸ್ರಾರು ಕುಟುಂಬಗಳಿಗೆ ಬೆಳಕಾಗಿರುವ ಜೀವಂತ ಧಾರ್ಮಿಕ ಕ್ಷೇತ್ರ. ದೇವತಾ ಸಾನ್ನಿಧ್ಯದಲ್ಲಿ ಈ ಕ್ಷೇತ್ರವು ಸಾವಿರಾರು ಸಮಾಜಮುಖಿ ಯೋಜನೆಗಳ ಮೂಲಕ ಪ್ರಜ್ವಲಿತವಾಗಿದ್ದು, ಸಾಮಾಜಿಕ ಬದಲಾವಣೆಗೆ ಮಾದರಿಯಾಗಿ ನಿಂತಿದೆ. ಇಂತಹ ಪುಣ್ಯಭೂಮಿಯ ವಿರುದ್ಧ ಇತ್ತೀಚೆಗೆ ಕೆಲವರು, ಧಾರ್ಮಿಕ ಶ್ರದ್ಧೆಯ ವಿರೋಧಿಗಳು ಹಾಗೂ ನಿರಾಧಾರ ನಿಲುವು ಹೊಂದಿರುವವರು, ಧರ್ಮಸ್ಥಳದ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ನೈತಿಕ ಶಿಕ್ಷಣ ತರಗತಿ ; ತಪ್ಪುಗಳ ಜವಾಬ್ದಾರಿಯನ್ನು ಹೊರುವ ಮನಃಸ್ಥಿತಿ ಬೇಕು : ಬಿ.ವಿ.ಸೂರ್ಯನಾರಾಯಣ -ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳು ಕೃತಜ್ಞತೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ. ಅದಾದಾಗ ಮಾತ್ರ ವ್ಯಕ್ತಿತ್ವ ಬೆಳಗಬಹುದು. ವೈಫಲ್ಯಗಳು ಅಥವಾ ತಪ್ಪುಗಳು ಸಂಭವಿಸಿದಾಗ, ಇತರರನ್ನು ದೂಷಿಸುವ ಬದಲು, ಸ್ವತಃ ಹೊಣೆ ಹೊತ್ತುಕೊಳ್ಳುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ನೈತಿಕ ಶಿಕ್ಷಣ ತರಗತಿಯಲ್ಲಿ ಬುಧವಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಜೀವನದಲ್ಲಿ ಸವಾಲುಗಳು ಅನಿವಾರ್ಯವಾದವುಗಳೇ ಆಗಿವೆ. ಎಲ್ಲವೂ...
1 176 177 178 179 180 980
Page 178 of 980