Wednesday, June 10, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಸುದ್ದಿ

BREAKING NEWS:-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಮಹಾಮಾರಿ 86 ಮಂದಿಗೆ ಕೊರೊನಾ ಪಾಸಿಟಿವ್-ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 86 ಮಂದಿಯಲ್ಲಿ ಕೊರೊನಾ ಸೋಂಕು ಪ್ರಕರಣ ದೃಢಪಟ್ಟಿದೆ. ಸೋಂಕಿತರನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿದೇಶ, ಮಹಾರಾಷ್ಟ್ರ ಮೂಲದಿಂದ ಮತ್ತು ಸ್ಥಳೀಯ ಉಸಿರಾಟದ ಸಮಸ್ಯೆ ಇರುವವರಲ್ಲಿ ಸೋಂಕು ಪತ್ತೆಯಾಗಿದೆ....
ದಕ್ಷಿಣ ಕನ್ನಡಸುದ್ದಿ

Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ವೈದ್ಯರಿಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 10 ಮಂದಿ ವೈದ್ಯರಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಇಡೀ ಜಿಲ್ಲೆಯ ಜನತೆಯ ಆತಂಕ್ಕೆ ಕಾರಣವಾಗಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಯ ಮುಖ್ಯ ವೈದ್ಯರೊರೊಬ್ಬರು ಹಾಗೂ ಕೊರೊನಾ ವಿಭಾಗದ ಮುಖ್ಯಸ್ಥರೊಬ್ಬರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದಾಗಿ ಮೂಲಗಳು ತಿಳಿಸಿವೆ. ಮುಖ್ಯ ವೈದ್ಯರು ಸೇರಿದಂತೆ ಕೊರೊನಾ ಆಸ್ಪತ್ರೆಯ ಹಲವು ವೈದ್ಯರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ಈ ಮೂಲಕ ಮಂಗಳವಾರ ದ.ಕ ಜಿಲ್ಲೆಯಲ್ಲಿ 44 ಕೊರೊನ ಪಾಸಿಟಿವ್ ಪತ್ತೆಯಾಗಿದೆ. ಆಸ್ಪತ್ರೆ...
ದಕ್ಷಿಣ ಕನ್ನಡಸುದ್ದಿಸುಳ್ಯ

Breaking News : ಕಡಬದಲ್ಲಿ ಕೊರೊನಾ ವಾರಿಯರ್ ಗೆ ಕೊರೊನಾ ಪಾಸಿಟಿವ್..! – ಕಹಳೆ ನ್ಯೂಸ್

ಕಡಬ : ಕೆಲ ದಿನಗಳ ಹಿಂದೆಯಷ್ಟೇ ಕಡಬಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ಇಂದು ಮತ್ತೆ ಕಡಬಕ್ಕೆ ಆಘಾತ ನೀಡಿದೆ. ಕಡಬದ ಕೊರೋನಾ ವಾರಿಯರ್ ಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸುಳ್ಯದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊರೋನ ವಾರಿಯರ್ ಒಬ್ಬರಿಗೆ ನಿನ್ನೆ ಕೊರೋನ ಪಾಸಿಟಿವ್ ಬಂದಿದ್ದು, ಸೋಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಡಬದ ವಾರಿಯರ್ ಗು ಇಂದು ಕೊರೋನ ಪಾಸಿಟಿವ್ ಬಂದಿದ್ದು ಸದ್ಯ ಸ್ಥಳೀಯಾಡಲಿತ ಸೋಂಕಿತರ ಮನೆಗೆ ತೆರಳಿ ಸೀಲ್ ಡೌನ್ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ....
ದಕ್ಷಿಣ ಕನ್ನಡಸುದ್ದಿ

ಮಂಗಳೂರು ಕೇಂದ್ರ ಕಾರಾಗೃಹದ ಖೈದಿ ಹಾಗೂ ಮತ್ತೋರ್ವ ಪೊಲೀಸ್ ಗೂ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಮಂಗಳೂರು, ಜೂ 30 : ಮಂಗಳೂರು ಕೇಂದ್ರ ಕಾರಾಗೃಹ ದ ಖೈದಿ ಹಾಗೂ ಈ ಹಿಂದೆ ಉಳ್ಳಾಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಗಳೂರು ಗ್ರಾಮಾಂತರ ಠಾಣಾ ಸಿಬ್ಬಂದಿಯಲ್ಲೂ ಕೊರೊನಾ ಪಾಸಿಟಿವ್ ಬಂದಿದೆ. ಮಂಗಳೂರು ಕೇಂದ್ರ ಕಾರಾಗೃಹದ ವಿಚಾರಣಾಧೀನ ಖೈದಿ ಮನೋರೋಗದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಈತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹೀಗಾಗಿ ಈತನಿಗೆ ಆಸ್ಪತ್ರೆ ಸಿಬ್ಬಂದಿ ಯಿಂದ ಕೊರೊನಾ ಹರಡಿರುವ ಶಂಕೆ ವ್ಯಕ್ತವಾಗಿದ್ದು ಮುನ್ನಚ್ಚೆರಿಕಾ ಕ್ರಮವಾಗಿ ಖೈದಿ ಜೊತೆ ಇದ್ದ...
ದಕ್ಷಿಣ ಕನ್ನಡಪುತ್ತೂರು

ಪುತ್ತೂರು ನಗರಸಭೆ ಹೊರಗುತ್ತಿಗೆ ನೌಕರ ಚಾಲಕನಿಗೆ ಕೊರೋನಾ ಪಾಸಿಟಿವ್ ‌; ಸೋಂಕಿತನ ಸೋಂಕಿನ ಮೂಲ‌ ನಿಗೂಢ – ಕಹಳೆ ನ್ಯೂಸ್

ಪುತ್ತೂರು : ನಗರಸಭೆ ಹೊರಗುತ್ತಿಗೆ ನೌಕರನಿಗೆ ಜೂ.29ರಂದು ಕೊರೋನಾ ಸೋಂಕು ದೃಢಪಟ್ಟಿದೆ. ಇವರು ನಗರಸಭೆಯ ಕಸ ಸಂಗ್ರಹದ ವಾಹನ ಚಾಲಕರಾಗಿದ್ದಾರೆ. ಚಾಲಕನ ಸೋಂಕಿನ ಮೂಲ ನಿಗೂಢ, ಈತ ಬೆಟ್ಟಂಪಾಡಿ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ....
ದಕ್ಷಿಣ ಕನ್ನಡಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ನಲ್ಲಿ ಮೀನು ಮಾರುತಿದ್ದ ಯುವಕನಿಗೆ ಕೊರೋನಾ ಪಾಸಿಟಿವ್ – ಕಹಳೆ ನ್ಯೂಸ್

ಬೆಳ್ತಂಗಡಿ : ತಾಲೂಕಿನ ಮಂಡತ್ಯಾರು ಇಲ್ಲಿಯ ಕಾನ್ವೆಂಟ್ರೋಡ್ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಬಿಸಿ ರೋಡಿನ ಯುವಕನಿಗೆ ಮೀನು ವ್ಯಾಪಾರಿ 30ವರ್ಷ ಪ್ರಾಯದ ಯುವಕನಿಗೆ ಕೊರೋನಾ ಪಾಸಿಟಿವ್ ಬಂದಿದೆ. ಯುವಕ ಒಂದೂವರೆ ತಿಂಗಳ ಹಿಂದೆ ಗೌಲ್ಫ್ ನಿಂದ ಬಂದು ಕೊರಂಟೈನ್ ಮುಗಿಸಿದ್ದರು. ಬಳಿಕ ಮಡಂತ್ಯಾರ್ ತನ್ನ ಸಂಬಂಧಿಕರ ಮನೆಯಲ್ಲಿದ್ದು ಮೀನು ವ್ಯಾಪಾರ ಮಾಡುತಿದ್ದರು ಎನ್ನಲಾಗಿದೆ. ತನಗೆ ಅಸೌಖ್ಯವಿದ್ದ ಕಾರಣ 15ದಿನದ ಮೊದಲುಚಿಕಿತ್ಸೆಗೆ ಒಳಪಟ್ಟು ತನ್ನ ಗಂಟಲ ದ್ರವ ಪರೀಕ್ಷಿಸಿದಾಗ ಕೊರೋನಾ ಪಾಸಿಟಿವ್...
ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ವೈರಸ್ ಗೆ ಮತ್ತೊಂದು ಬಲಿ ; ಉಳ್ಳಾಲದ 60 ವರ್ಷದ ಮಹಿಳೆ ಮೃತ್ಯು – ಜಿಲ್ಲೆಯಲ್ಲಿ ಒಟ್ಟು 14 ಮಂದಿ ವೈರಸ್‌ ಗೆ ಬಲಿ – ಕಹಳೆ ನ್ಯೂಸ್

ಮಂಗಳೂರು: ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಳ್ಳಾಲದ 60 ವರ್ಷದ ವೃದ್ಧೆ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಈ ಮೂಲಕ ಕೊರೋನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೇರಿದೆ. ಉಳ್ಳಾಲ ನಿವಾಸಿಯಾದ ಇವರು ಕೆಲವು ದಿನಗಳ ಹಿಂದೆ ಸೋಂಕಿಗೆ ತುತ್ತಾಗಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ದಕ್ಷಿಣ...
ದಕ್ಷಿಣ ಕನ್ನಡಪುತ್ತೂರುಬಂಟ್ವಾಳ

ಪುತ್ತೂರಿನ ಕೊರೊನಾ ಸೋಂಕಿತನ ಸಂಪರ್ಕದಲ್ಲಿದ್ದ ಕಂಬಳಬೆಟ್ಟಿನ ಅಂಗಡಿ ಮಾಲೀಕನಿಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ವಿಟ್ಲ: ಕಂಬಳಬೆಟ್ಟು ಅಂಗಡಿ ಮಾಲಿಕನಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಮೊನ್ನೆ ಪುತ್ತೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು, ಅವರ ಸಂಪರ್ಕದಿಂದ ಅವರ ಸಂಬಂಧಿ ಕಂಬಳಬೆಟ್ಟು ಕೊರೊನಾ ಸೊಂಕು ಪತ್ತೆ ಆಗಿದೆ. ಪುತ್ತೂರಿನಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದ್ದಂತೆ ಅವರ ಸಂಬಂಧಿಗೆ ಸೇರಿದ ಅಂಗಡಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಬಳಿಕ ಅವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಇಂದು ಸೋಂಕು ದೃಢಪಟ್ಟಿದೆ. ಇವರ ಅಂಗಡಿಗೆ ಹಲವಾರು ಭೇಟಿ ನೀಡಿದ್ದು, ಸೋಂಕು ಹರಡಿರುವ ಸಾಧ್ಯಗಳಿದ್ದು,...
1 733 734 735 736 737 739
Page 735 of 739