ತೆಂಗಿನ ಎಣ್ಣೆಯಿಂದ ಸ್ಯಾನಿಟೈಸರ್ ಸಂಶೋಧಿಸಿದ ವಿದ್ಯಾರ್ಥಿ ; ಜಗತ್ತನೇ ನಡುಗಿಸುತ್ತಿರೋ ಕೊರೊನಾ ವೈರಸ್ ತಡೆಗಟ್ಟೋಕೆ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ‘ಕಲ್ಪಶುದ್ಧಿ’ – ಕಹಳೆ ನ್ಯೂಸ್
ತುಮಕೂರು: ಕೊರೊನಾ ತಡೆಗೆ ಈಗ ಸ್ಯಾನಿಟೈಸರ್ ಕೂಡ ಒಂದು ಮದ್ದಾಗಿದೆ. ಹೀಗಾಗಿ ಕಲ್ಪತರು ನಾಡಿನ ವಿದ್ಯಾರ್ಥಿಯೋರ್ವ ತೆಂಗಿನ ಎಣ್ಣೆ ಬಳಸಿಕೊಂಡು ಸ್ಯಾನಿಟೈಸರ್ ಸಂಶೋಧಿಸಿದ್ದಾರೆ. ಜಗತ್ತನೇ ನಡುಗಿಸುತ್ತಿರೋ ಕೊರೊನಾ ವೈರಸ್ ತಡೆಗಟ್ಟೋಕೆ ಮತ್ತೊಂದು ರೀತಿಯ ಸ್ಯಾನಿಟೇಸರ್ ಹೊರತರೋಕೆ ವಿದ್ಯಾರ್ಥಿ ಕಾಯುತ್ತಿದ್ದಾರೆ. ತುಮಕೂರು ನಗರದ ಎಸ್ಐಟಿ ಕಾಲೇಜಿನ ಎಂಜಿನಿಯರಿಂಗ್ ಬಯೋಕೆಮಿಕಲ್ ವಿಭಾಗದ ವಿಧ್ಯಾರ್ಥಿ ಎಚ್.ಎನ್.ಚಿದಾನಂದ್ ಹೊಸ ಸ್ಯಾನಿಟೈಸರ್ ಸಂಶೋಧಿಸಿದ್ದು, ಆ ಮೂಲಕ ಗಮನ ಸೆಳೆದಿದ್ದಾರೆ. ಅಂದುಕೊಂಡಂತೆ ಆದರೆ ಕೆಲವೇ ದಿನಗಳಲ್ಲಿ ‘ಕಲ್ಪಶುದ್ಧಿ’ ಎಂಬ ಹೆಸರಿನ...







