Wednesday, June 10, 2026
ಸುದ್ದಿ

Breaking News : ಹಿಂದೂ ಧರ್ಮದ ಸಾಮರಸ್ಯದ ಕೊಂಡಿ ಬಾಳೆಕೋಡಿ ಡಾ. ಶ್ರೀ ಶಶಿಕಾಂತಮಣಿ ಸ್ವಾಮೀಜಿ ಇನ್ನಿಲ್ಲ – ಕಹಳೆ ನ್ಯೂಸ್

ಬಂಟ್ವಾಳ : ಶಿಲಾಂಜನಾ ಕ್ಷೇತ್ರದ ಶ್ರೀ ಡಾ. ಶಶಿಕಾಂತಮಣಿ ಸ್ವಾಮೀಜಿ ಕಿಡ್ನಿ ಸಂಬಂಧಿಸಿದ ಅನಾರೋಗ್ಯದಿಂದ ನಿಧನರಾದರು.

ಜಾಹೀರಾತು

ಸ್ವಾಮೀಜಿಗೆ 45 ವರ್ಷವಾಗಿತ್ತು. ವಿಟ್ಲ ಕನ್ಯಾನ ಸಮೀಪದ ಬಾಳೆಕೋಡಿ ಎಂಬಲ್ಲಿ ಆಶ್ರಮ ಹೊಂದಿದ್ದು ಕಳೆದ ಹಲವಾರು ವರ್ಷಗಳಿಂದ ಭಕ್ತರಿಗೆ ಆಶೀರ್ವಚನ ನೀಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಾಳೆಕೋಡಿಯಲ್ಲಿ ಶಿಲಾಮಯ ಕಾಳಬೈರವೇಶ್ವರ ದೇವಸ್ಥಾನ ಜೀರ್ಣೋದ್ದಾರ ಕಾಮಗಾರಿ ನಡೆಯುತಿತ್ತು.
ಸ್ವಾಮೀಜಿಯವರು ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಕ್ಷೇತ್ರದ ಸಮೀಪದಲ್ಲಿರುವ ಮನೆಯಲ್ಲಿದ್ದರು. ಅವರಿಗೆ ಜರ್ಮನಿಯ ಇಂಟರ್ ನ್ಯಾಶನಲ್ ಪೀಸ್ ಯುನಿವರ್ಸಿಟಿ ಡಾಕ್ಟರೇಟ್ ಬಿರುದು ಕೂಡ ನೀಡಿತ್ತು. ತೀರಾ ಅನಾರೋಗ್ಯದಿಂದ ಕ್ಷೇತ್ರದಲ್ಲಿ ನಿನ್ನೆ ಬಾಳೆಕೋಡಿಯಲ್ಲಿ ತಡರಾತ್ರಿ ನಿಧನರಾಗಿದರು.