ಬಂದಾರು, ಮೊಗ್ರು,ಕಣಿಯೂರು ಗ್ರಾಮಗಳಲ್ಲಿ ತೀವ್ರ ನೆಟ್‌ವರ್ಕ್ ಸಮಸ್ಯೆ:ಗ್ರಾಹಕರ ಆಕ್ರೋಶ ಉದ್ಯೋಗಿಗಳು, ವಿದ್ಯಾರ್ಥಿಗಳ ಪರದಾಟ-ಕಹಳೆ ನ್ಯೂಸ್

ಬೆಳ್ತಂಗಡಿ : ಬಂದಾರು, ಮೊಗ್ರು, ಕಣಿಯೂರು ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ ಹೇಳತೀರದು. ಬೈಪಾಡಿ, ಪಾಣೆಕಲ್ಲು, ಮೊಗ್ರು, ಮೈರೋಳ್ತಡ್ಕ, ಊoತನಾಜೆ, ಮುಗೇರಡ್ಕ, ಪದ್ಮುಂಜ, ಕಣಿಯೂರು ಪ್ರದೇಶ ದಲ್ಲಿ ಊರಿನ ಅಕ್ಕ -ಪಕ್ಕದಲ್ಲೆ ಟವರ್ ಇದ್ರೂ ನೆಟ್ವರ್ಕ್ ಇಲ್ಲದೆ ಗ್ರಾಹಕರು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ,ಇಂಟೆರ್ ನೆಟ್ ಬಿಡಿ, ಕಾಲ್ ಮಾಡಿ ಮಾತನಾಡಿದರು ಟೂಯ್ನ್, ಟೂಯ್ನ್ ಅಷ್ಟೇ ಮಾತು ಕೇಳಿಸಲ್ಲ, ಟವರ್ ಇದ್ದು ಇಲ್ಲದಂತಾಗಿದೆ. ಇದರಿಂದಾಗಿ ವರ್ಕ್ ಪ್ರಮ್ ಹೋಂ ಉದ್ಯೋಗಿಗಳು ಬಹಳಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೂ, ಗ್ರಾಹಕರಿಗೆ ಸಮಸ್ಯೆ ಕಾಡಿದೆ.
ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಮಸ್ಯೆ ತಿಳಿಸಿದರು ಯಾವುದೇ ಪ್ರತಿಕ್ರಿಯೆ ಇಲ್ಲದಾಗಿದೆ..
ಮುಂದೆ ಸಮಸ್ಯೆ ಮುಂದುವರಿದರೆ ಪ್ರತಿಭಟನೆಗೆ ಗ್ರಾಮಸ್ಥರು ಮುಂದಾಗಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.














